ಹಾಗೆ ಸುಮ್ಮನೆ.

ಬಯಕೆಯ ಬೆನ್ನಿಗೆ ಬಿದ್ದರೆ
ಬದುಕೇ ಬರುಡಾಗುವದು.
ಕಾಳಜೀ, ಕಾತುರ, ಕಾಯಕವನೇ
ಕಡೆಗಣಿಸುವದು.

ನೆನೆದರೇ ನೆನೆಯುವೆ,
ಮರೆತರೇ ಮರೆಯುವೇ,
ತನ್ಮಯನಾಗುವೆ ನಿನ್ನನೇ ಹಿಂಬಾಲಿಸಿ.

ಸೇರುವೇ, ನಾ ಸೇರುವೇ
ಸನಿಹದ ಮಾತಿಗೆ.
ಕಾಯುವೇ, ನಾ ಕಾಯುವೇ
ನಿನ್ನಯ ಪ್ರೀತಿಗೆ.

ಮೌನವ ನೀ ಧರಿಸೇಯಾ
ಮಾತನೇ ನಾ ಮರೆಯುವೇ
ಕಾದಿಹೆನು ಕರಗದೇ, ಕರಗೆಯಾ ನೀನೀನ್ನು.
@ದಿlip

ನಮ್ಮ ಈ ಕುಟುಂಬ.

gettyimages-544654498-1024x1024

ನಾನು ಸಂಭ್ರಮಿಸುವ ಪ್ರತಿ ಹೆಜ್ಜೆಗಳು ನಿಮ್ಮೊಂದಿಗೆ
ನಾ ಕಾಣುವ ಕನಸುಗಳು ನಿಮ್ಮೊಟ್ಟಿಗಿ
ನಿಮ್ಮೊಂದಿಗೆ ಹರ್ಷ, ನಿಮ್ಮೊಂದಿಗೆ ಉಲ್ಲಾಸ.

ಈ ಜೇವನದ ಪ್ರತಿ ಪುಟಗಳ ಪರಿವಿಡಿ ನೀವು,
ಈ ಪ್ರತಿ ಮಿಡಿತಗಳ ಹಂಬಲ ನೀವು ,
ಈ ಸುಂದರ ಸ್ವರ್ಗಕ್ಕೆ ಸರಿ ಸಾಟಿ ಯಾರು.
– ಇದೇ ತಾನೇ ಸ್ವರ್ಗದ ಸವಿಸಾಚಿ.

@ದಿlip

 

 

ಬದುಕು & ಬಂಡಿ:

drawing1851

 

 

 

 

 

 

 

ಗೋತ್ತಾಗೋವರೆಗೇ ನಾನಿದ್ದೇ,
ಹೊತ್ತಾದ ಮೇಲೇ ಹೊರಟೋದೇ,
ಇನ್ನಾವ ಘಳಿಗೆ ಬರೆಲ್ಲೆವ್ವಾ.

ಹೋತ್ತು ಕಳೆಯಿತು, ಹೆತ್ತ ಮೇಲೇ
ಹೋತ್ತು ಮುಗಿಯಿತು, ಹೆಗಲ ಹೊತ್ತ ಮೇಲೆ

ಹೆತ್ತವರಾರು, ಹೂಳುವರಾರು,
ಹೆಣವಾದ ಮೇಲೇ.

ಕಾಡಿಗೆ ಅಂಜಿದರೇನ
ನಾಡ ಬಯಕೇ ತಿರಿದ ಮೇಲೇ.

@ದಿlip

#1

ನನಗೆ ಕಷ್ಟವಾದದ್ದು, ನೀ ಕೊಡೊ ಬಿಳ್ಕೊಡುಗೆ.

ಸಂದರ್ಭ : ಒಬ್ಬ ಸ್ನೇಹಿತ, ಇನ್ನೊಬ್ಬ ಸ್ನೇಹಿತನಿಗೆ ಹೇಳುವ ಸಮಾಲೊಚನೆ, ಅರ್ಥೆೃಸುವ ಸ್ನೇಹ ಸಂಭಂದಗಳ ಆಳ.

ಓ ಎಂತಾ ಮಾತು, ಬಲು ಹಿತವಾದ ನೋವು , ನನ್ನಿ ಅದೃಷ್ಟವಷ, ನನ್ನೀ ಹಿತೈಷಿಗಳಾಗಿ ನೀವಾಗಿರಲು, ಒಂದು ಅಂಕಣದ ಭಾದೆ, ಇನ್ನೊಂದು ಅಂಕಣಕ್ಕೆ ತಿಳಿಯುವುದೇ. ಇದೆಲ್ಲಾ ನಮ್ಮಿ ಅಂತರಂಗಕ್ಕೆ ಬಿಟ್ಟಿದ್ದು. ಅದೇಷ್ಟು ಸಾಧ್ಯ, ನಮ್ಮೀ ವಿಚಾರಗಳು ನಮ್ಮಂತೆಯೇ ಇರಬೇಕಲ್ಲವೇ,‌ ಹೀಗೊಂದುವೇಳೆ ಸರಿಯಿದ್ದರೆ ಈ ಮಾತುಗಳು ಬರುತಿರಲ್ಲಿಲವೋ ಏನೋ, ಅದು ತಿಳಿಯದ ಮಾತು.
ನಾನೊಬ್ಬ ಸ್ನೇಹ ಜೀವಿ, ನನಗಿರುವುದು ಸ್ನೇಹದ ಹಂಗು, ವಿನಹ ಮತ್ಯಾವುದು ಇಲ್ಲಾ. ಮನುಷ್ಯ ಕಟ್ಟು ಗೋಡೆಗಳ ಒಡೆಯ ಬಲ್ಲ, ಈ ಮೌನದ ಗೋಡೆಗಳಲ್ಲ.
ಇಂದೇಕೋ ನಮ್ಮೀ ಋಣದ ಬಾರಗಳೇ ಕಮ್ಮಿಯಾದಂತೆ ಅನಿಸುತಿದೆ, ಅದಕ್ಕೆ ಇರಬಹುದು ಈ ಅಡಚಣೆಗಳೇ ಗೊಂದಲಮಯವಾಗಿವೆ. ಸರಿ ಬಿಡು ಎನ್ನುವದಕ್ಕೆ ನಾನೊಬ್ಬ ಸಮರ್ತನೆ ಅಲ್ಲ .
ಈ ಜೀವನದ ಜೋಕಾಲಿ ಮುಂದೆ ಹೋದಂತೆ, ಹಿಂದೆಯೂ ಬರಬೇಕಲ್ಲವೇ. ಅದ್ಯಾವ ಗಳಿಗೆ ನಮ್ಮನ್ನು ಇಲ್ಲಿ ತಂದು ನಿಲ್ಲಿಸಿದೆ, ಅದು ತಿಳಿಯದ ಮಾತು, ನಾನು ಬಿಳ್ಕೊಡುವೆ ನನ್ನ ಈ ವಿಕಾರಾತ್ಮಗಳ.
ತಿಳಿಹೇಳುವೆ ನನ್ನೀ ಈ ಬುದ್ದಿ ಭ್ರಮಣೆಗೆ, ಶರಣಾಗಿಹೆ ನಾನಿಂದು ನಿಮ್ಮೀ ಕೃತಘ್ನತೆಗಳ ದಾರಿಯಲಿ.
-ಮನ್ನಿಸು ನನ್ನನ್ನು.
@ದಿlip

ತಿಳಿ ಗಾಳಿ

photo-1495427513693-3f40da04b3fd

 

ಸಾರಿ ಸಾರಿ ನಾ ಕೇಳುವೆ,
ನನ್ನ ಈ ಎಕಾಂತದ ಧ್ವನಿಯನ್ನು.

ಯಾರೊ ನಾನು, ಯಾರೇ ನೀನು,
ಅನ್ನೊ ಮನುಜರೆಲ್ಲಾ,
ಮಾತೇ ಎಕೇ ಬೇಕು.
ಸರಿದಾರಿ ಎಲ್ಲಿ, ಸರಿಯಾವುದಿಲ್ಲಿ.

ಸನಿಹ,ಸನಿಹ ಮಾತೆಲ್ಲವು,
ಹೇಳಿ ಕೇಳಿ ಮರೆಯಾಗುತ್ತಿದೆ.
ಮೌನ, ಮೌನ ನಾ ತಾಳುವೇ
ಮನಸು ಕುಡಾ ಮರೆಮಾಚದೇ.

ಹೇಳಿ ಕೇಳಿ ಬರುವುದೆಲ್ಲಾ,
ಕೇಳದಲೆ ಕಾನೆಸಿಗುವುದೆಲ್ಲಾ.
ನೀನೇ, ನೀನೇ, ನನಗೆಂದಿಗು.

ಯಾರೆಂದರು ನೀನೇ ಕಣೆ,
ಎನಾದರು ನನ್ನಾ ಹೊಣೆ,
ಒ ಜೀವವೇ ಬೇಕಲ್ಲವೇ.

ಎನನ್ನೇ ಹೇಳು, ಎನನ್ನೇ ಕೇಳು,
ನಾನೆಂದು ಇಲ್ಲಿ ಮೊದಲಿಲ್ಲವೇನು.
ಸಾರಿ ಸಾರಿ ನಾ ಹೇಳಿದೆ,
ನನ್ನ ಈ ಎಕಾಂತದ ಧ್ವನಿಯನ್ನು.

~ ತಿಳಿ ಗಾಳಿಗೆ ಮೈ‌ ಎಲ್ಲವು ಸೊಕಾಗಿದೆ,
        ಹನಿ ಪ್ರೀತಿಗೆ ಮನಸೆಲ್ಲವು ಮಂಕಾಗಿದೆ.

                                                     @ದಿlip

ಸಂಜೆ ಸೂರ್ಯ !


ನುರೊಂದು ಪಾಲು ನನಗೇತಕೆ,
ನಿನ್ನೊಂದು ಪಾಲು ನನಗಿಲ್ಲವೆ,
ಸರಿಯಾದ ದಾರಿ ಇನ್ನೆಲ್ಲಿದೆ,
ಅಡಚನೆಯೇ ಇಲ್ಲಿ ಗುರಿಯಾಗಿದೆ.
-ನಿಲ್ಲೋದು ಹೇಗೆ ಈ ಕೊಂಡಿಯಾ ಕಳಚಿ.

ಕೂಗುವೆನು ನಾನಿನ್ನು,
ಕಳಿಯೊದು ಹೇಗೆ ಈ ಕಾಲವ,
ಕಾಣಹೊಗಿದೆ ನಾ ಕುರುವ ಜಾಗ,
ಜೊತೆಗಾರತಿ ನೀನಿಲ್ಲದೆ.

ಪ್ರಕಟಿಸಿವೆನು ನಿನ್ನೀ ಕಲ್ಪೆನೆಯ ಕಾದಂಬರಿಗಳ,
ತಿಳಿ ಹೇಳು ನಿನ್ನ ಈ ಬರಹಗಾರನಿಗೆ,
ಮರುಜನ್ಮವೇ ನಮ್ಮ ಈ ಮುನ್ನುಡಿಯಾಗಿ.

ಸಾಲಲ್ಲವೇ ಈ ಸಮಾದಾನ,
ಬೇಕಲ್ಲವೇ ಈ ಬಹುಮಾನ,
ಬರಹೇಳುವೆಯಾ ಆ ಸಂಜೆ ಸೂರ್ಯನಿಗೆ,
ಮುಗಿದಿದೆ ನಮ್ಮೀ ಮುಕ್ತಾಯ.

@ದಿlip

ಕಣ್ಣ ನೆನಪು

d5a800ed722526f45cb5ad1166b39473

 

ಪ್ರೀತಿ ಎನ್ನೊ ಮರಳ ಮೇಲೆ,
ನಿನ್ನ ಕವಿತೆ ಕವಿಯದೇ.
ದೂರವಾದ ಪಯಣವೂಂದು
ನಿನ್ನ ಈ ದಡಕೆ ಸೆಳೇಯದೇ.

ನಿನೇ ನಿನೇ ನನ್ನ ಕಣವರಿಕೆ,
ನಿನೇ ನಿನೇ ನನ್ನ ಕಳವಳ.

ಕಣ್ಣ ಬಿಂದು ಅಂಚಿಣ ಹನಿಯು ಕೂಡಾ
ಕಾತುರ ಪಡೆಯದೆ ನಿನ್ನ ಅರಸಿ,
ನಿನ್ನ ಈ ನೆನಪು ಜಾರಿ ಇಂದು
ಕಡಲು ಅಲೆಯೇ ಶಂತವಾಯಿತೇ.

ಅಲೆವಾ ಮನಕೆ ಪ್ರಾಯ ಬಂತೇನು
ಅರಳೊ ಮುಂಚೆನೇ, ಅಳಲ ಮುಟ್ಟಿತೇ,
ನಿನ್ನ ಈ ಒಂದು ಸೆಳತ ಮೀರಿ
ಸವಾರಿ ಮಾಡಿತೇ ನನ್ನ ಮನುಸು.

ಹಗಲ ಕಳೆವ ಮುನ್ನ
ಕಳದೇ ಹೋಯಿತೇ ಕಣ್ಣ ನೆನಪು..

@ದಿlip

ಇವಳೇನ ಇವಳೇನ….

ಇವಳು ಹರೆಯಾ ತುಂಬಿದ ಹೆಣ್ಮಗಳೆನ,
ಇವಳು ಹರೆಯಾ ತುಂಬಿದ ಹೆಣ್ಮಗಳೆನ.

ಹೊತ್ತು ಮುನಿಗೆದರೆನ,
ಇವಳ ಹೊನಲಿನಾಟ.

ಇಗೊಮ್ಮೆ ಆಗೊಮ್ಮೆ ಬೆಂದುಹೊಗುವಳೆನ
ಇವಳು~ ಹರೆಯಾ ತುಂಬಿದ ಹೆಣ್ಮಗೆಳೆನ,
ಹರೆಯಾ ತುಂಬಿದ ಹೆಣ್ಮಗೆಳೆನ.

ಚೆಂದದಿ ಅಂದದಿ ತುಂಬಿರುವಳು,
ಕರೆದರೆ ಕಲ್ಪನೆಗೆ ಕಾಡುವಳೆನ.

ಊರವಳಗಿನ ಪಲ್ಲಕ್ಕಿಗೆ ಶೃಂಗಾರ ಇವಳು,
ಮತ್ತೆಂದು ಮಾಸದ ಹುಣ್ಣಿಮೆ ಇವಳೆನ.

ಇವಳು ಹರೆಯಾ ತುಂಬಿದ ಹೆಣ್ಮಗಳೆನ,
ಇವಳು ಹರೆಯಾ ತುಂಬಿದ ಹೆಣ್ಮಗಳೆನ.

ಬಿಸುವ ಪಗಡೆಗೆ ಸಿಗುವಳ ಇವಳು,
ಅಂಜುವ ಅಳುಕ ಬಿಟ್ಟವಳೆನ.

ಸಿಹಿ ಅಂಚಿಗೆ ತಾಕಿ,
ಕಣ್ಣಿನ ಕಾಡಿಗೆ ಕರಗಿತೇನ.

ಬಿಂಕವ ಬಿಟ್ಟು ಬನದಾ ಮರೆಯಲಿ,
ಬೆರೆಯುವಳೆನ.

ಇವಳು ಹರೆಯಾ ತುಂಬಿದ ಹೆಣ್ಮಗಳೆನ,
ಇವಳು ಹರೆಯಾ ತುಂಬಿದ ಹೆಣ್ಮಗಳೆನ.

~ಸುಖದಾ ಸಲ್ಲಾಪಕೆ ಸಹಿ ಹಾಕಿದಳೆನ,
ಇವಳೆನ,ಇವಳೆನ, ನನ್ನ ಆ ಒಡತಿ,
ಮನದಾಳಾದ ಮಡದಿ.

                                                                                    @ದಿlip