ಸಿಹಿ ಹನಿ

ಎಲೇ ಹುಡುಗಿ, ನೀ ಕರೆದರೆ ಸಾಕ ಮನೆ ಕಡಿಗೆ, ಹಿಡಿದ ಬರತೇನ ಕರಿ‌ನೆರಳ. ತಿಳಿದ ನಿನ ನೀ ನುಡಿಯ, ತಪ್ಪು ಒಪ್ಪಿನ ಮಾತೆಲ್ಲಾ. ಸಿರಿತನದ ಮಾತ ಬೇಕಿಲ್ಲ, ಬಡವನ ಬಾದೆ ನೀ ತಿಳಿಯ. ಚವಡಿಯಕಟ್ಟಿಯ ಅಂಗಳಕ ಸುಳಿದರೆ ಸಾಕ ನೀ ಇನ್ನು, ತರ ತರ ಮಂದಿಯ ಕಣ್ನಗಳ ಪಿಳಿ ಪಿಳಿ ಹಾಸಿ ಸುಳಿತಾವ. ಕಷ್ಟಾ ಆದರ ಎನಂತ, ಇಷ್ಟಾ ಆಗಿ ನೀ ಗೆಳತಿ.. ಎಲೇ ಹುಡುಗಿ, ನೀ ಕರೆದರೆ ಸಾಕ ಮನೆ ಕಡಿಗೆ, ಹಿಡಿದ ಬರತೇನ ಕರಿ‌ನೆರಳ.

ಎಲೇ ಹುಡುಗಿ,
ನೀ ಕರೆದರೆ ಸಾಕ ಮನೆ ಕಡಿಗೆ,
ಹಿಡಿದ ಬರತೇನ ಕರಿ‌ನೆರಳ.

ತಿಳಿದ ನಿನ ನೀ ನುಡಿಯ,
ತಪ್ಪು ಒಪ್ಪಿನ ಮಾತೆಲ್ಲಾ.
ಸಿರಿತನದ ಮಾತ ಬೇಕಿಲ್ಲ,
ಬಡವನ ಬಾದೆ ನೀ ತಿಳಿಯ.

ಚವಡಿಯಕಟ್ಟಿಯ ಅಂಗಳಕ
ಸುಳಿದರೆ ಸಾಕ ನೀ ಇನ್ನು,
ತರ ತರ ಮಂದಿಯ ಕಣ್ನಗಳ
ಪಿಳಿ ಪಿಳಿ ಹಾಸಿ ಸುಳಿತಾವ.

ಕಷ್ಟಾ ಆದರ ಎನಂತ,
ಇಷ್ಟಾ ಆಗಿ ನೀ ಗೆಳತಿ..

ಎಲೇ ಹುಡುಗಿ,
ನೀ ಕರೆದರೆ ಸಾಕ ಮನೆ ಕಡಿಗೆ,
ಹಿಡಿದ ಬರತೇನ ಕರಿ‌ನೆರಳ.                                                                                         @ದಿlip

 

Advertisements

ಅಭ್ಯಾಸವಾಗಿದೆ ಇನ್ನೇನು….!

Charming-baby-girl-beaitiful-painting

ಗೆಳತಿಯೆ ನೀ ಬರದೆ ಹೋದರೆ,

ಕದಲಿತೆ ನನ್ನ ದಾರಿ,

ಅಭ್ಯಾಸವಾಗಿದೆ ಇನ್ನೇನು.

ಸನಿಹವ ನೀ ಮರೆತರೇನು, 

ತಾಳೆನು ನಾನು ಇನ್ನು,

ಕೃತಘ್ನಳಾಗೆ ನೀ ಬಹು ಬೇಗ.

ತುಂಟತನದಾ ಮಾತುಗಳಿಗೆ, 

ಗಂಟೆಗಟ್ಟಲೆ ಸಮಯಕಳೆದು,

ಅಭ್ಯಾಸವಾಗಿದೆ ಇನ್ನೇನು.

ನಡೆದರೆ ನಿನ್ನ ಹಿಂದೆ,

ತಿರುಗೆಯಾ ಮೌನ ಮುರಿದು,

ನನಗೆಲ್ಲಾ ನಿನೇ ಇನ್ನೇನು.

ಕೂತರು.. ನಿಂತಹಾಗೆ,

ನಿಂತರು.. ಕೂತಹಾಗೆ,

ಹೀಗೆನೇ ಅರಳು ಮರಳು.

ಅಭ್ಯಾಸವಾಗಿದೆ ಇನ್ನೇನು.

ಬಯವ ನೀ ಬಿಡದೆ ಹೋದರೇನು,

ಜಗಕೆಲ್ಲಾ ನಾವೇ ಜೋಡಿ ಇನ್ನು.

ಹಾರಾಡು ನೀ ಸ್ವಚ್ಛಂದದಿ ಇನ್ನೇನು.

ನಿನ್ನ ನಗೆಯು, ನನ್ನ ಮರುಳು

ನಿನ್ನ ಧ್ವನಿಯು, ನನ್ನ ಗುಂಗು

ಇದೇನೆ ನನ್ನ ಗೋಳು.

ಅಭ್ಯಾಸವಾಗಿದೆ ಇನ್ನೇನು.

ಮಲಗೆ ನೀ ಕೂಸುಮರಿ,

ಮುದ್ದಾಡುವೆ ಪ್ರತಿದಿನ

  ಅಭ್ಯಾಸವಾಗಿದೆ ಇನ್ನೇನು.

                                                                                                      @ದಿlip

ನಮ್ಮೂರು ಶಿರಿಯೂರು.

 

This slideshow requires JavaScript.

   

ಸಂಭ್ರಮದ ಹೆಜ್ಜೆಯ ಗುರುತುಗಳಲಿ, ಈ ಹೆಜ್ಜೆಯು ಕೊಡಾ ಒಂದು, ಇಲ್ಲಿ ಪ್ರತಿ ನೆನಪುಗಳು ಕೂಡಾ ಒಂದು ಹೊಸ ಹೊಸ ಮೆರಗು, ನಮ್ಮ ಭಾವನೆಗಳ ಭಾವ ಚಿತ್ರಗಳು, ಈ ಬದುಕಿಗೂ ಒಂದು ಭಾವಾರ್ಥವಾಗಿದೆ . ವರ್ಷದ ಕೋಣೆಗಳಿಗೆ ಭರ್ಜರಿ ಬಾರಿಸಿ, ಮತ್ತೆ ಆಹ್ವಾನ ಕೊಡುವುದು ಮರು ವರ್ಷಕೆ. ಇಲ್ಲಿ ಕೂಡಿ ಹಾಡಿದರೆ ಸಂಗೀತ , ಕೂಡಿ ನಡೆದರೆ ಒಗ್ಗಟ್ಟು , ಕೂಡಿ ಕುಣಿದರೆ ಪಲ್ಲಕ್ಕಿ ಜಾತ್ರೆನೆ.

ಇವರೆಲ್ಲಾ ತಮ್ಮದೇ ಆದ ಪ್ರತಿಗಳ ಪ್ರತಿಮೆನೇ ಹವ್ದು, ತಮ್ಮದೇ ಆದ ಪರ್ಯಾಯ ದಾರಿಗಳಲಿ ಪ್ರಭಾವಿತರೇ ಹವ್ದು. ಈ ಸಮ್ಮಿಲನಗಲ್ ಕ್ಷಣ ಅದ್ಬುತಗಳಿಗೆ ಅತ್ಯದ್ಭುತ.

ಇದರ ಪೀಠಿಕೆನೆ ಹೀಗೆ, ಇನ್ನ ಇದರ ಗದ್ಯಪಾಠ ಹೇಗೆ? ನೋಡುನ ಒಂದು ವಿಸ್ತಾರನ ರೂಪ.

ಶಿರಿಯೂರ್, ಸಿರಿ ಸಂಪತ್ತಿನ ಸಮೃದ್ಧಿ, ಶ್ರೇಷ್ಠತೆಯ ಹೆಗ್ಗಳಿಕೆ, ಇದಕ್ಕಿಲ್ಲ ಕಾರ್ಯನಿ ಮತ್ತು ಕತೃ ಒಂದೇ ನಮಗಿಲ್ಲಿ. ಇವರೇ ನಮ್ಮೆಲ್ಲರ ಹಿರಿಮೆ, ಗರಿಮೆ. ಅವರೇ ಶ್ರೀ ಲಿಂಗೈಕ್ಯ ಪರಮ ಗುರು ಶ್ರೀ ಶಿದ್ದೇಶ್ವರ ಸ್ವಾಮಿ. ಇವರ ಈ ಮಾರ್ಗದ ದಾರಿಯೇ, ನಮ್ಮೆಲ್ಲರ ದಾರಿ ದೀಪ. ಈ ಪುಣ್ಯ ಕ್ಷೇತ್ರದ ಗರ್ಭದಲಿ ನಾವುಗಳು ಇರುವುದೇ ನಮಗಿದರ ಹೆಮ್ಮೆ ವಿಷಯ್. ನಮೋ ಶ್ರೀ ಶಿದ್ದೇಶ್ವರ.

ತಿಳಿ ನೀಲಿ ಆಗಸದಲಿ, ಕಡು ಹಸುರಿನಾ ತಂಪು ನಮ್ಮೂರು. ನೋಡ ಇದರ ವಿವರಣಾ ರೂಪ.

ಇದು ಸಾಕ್ಷರತೆ ಸಮ್ಮಿಲನಗಳ ಹೊಸ ರೂಪ. ಅವರಿಲ್ಲಾ, ಇವರಿಲ್ಲಾ ಅನ್ನೋ ಮಾತುಗಳೇ ಇಲ್ಲಿ ಇಲ್ಲಾ.ಇಲ್ಲಿ ಇಹರು ಮೇಧಾವಿಗಳ ದಂಡು ಇದಕ್ಕೊಂದು ಪ್ರತ್ಯ್ಕ್ಷ ದರ್ಶಿಎಂದರೆ, ಇಲ್ಲಿರುವ ನಮ್ಮಿ ಯೋಧರು, ನಿರ್ವಾಹಕ ಮತ್ತು ಚಾಲಕರು ಸಾಲುಗಳು, ಮತ್ತೆ ಶಿಕ್ಷಕರು. ಇವರೆಲ್ಲಾ ಮೊದಲ ಪುಟಗಳ ಸಾಲಿನಲ್ಲಿ ಇಹರು. ಮತ್ತೆ ಮಿಗಿಲಾಗಿ ನಮ್ಮೆಲ್ಲರ ರೈತಾಪಿ ಬಂದುಗಳು.

ಹೀಗೊಬ್ಬ ರಾಷ್ಟ್ರ್ ವಿಜೇತೆಯೋ ಹವ್ದು, ನಮ್ಮೂರಿನ ಹಿರಿಯರಲ್ಲಿ ಇವರು ಒಬ್ಬರು, ಇವರ ಸಾಧನೆಯು ಅಪಾರ, ಸಮಾಜ ಸೇವಕಿಯೆಯಲ್ಲಿ ಮೊದಲ ಕೈ, ಇವರ ಹೋರಾಟ ದೇವದಾಸಿ ಪದ್ದತಿಯ ನಿರ್ಮೊಲನೆ, ಇವರು ಅದೆಷ್ಟೋ ಬಡ ಕುಟುಂಬಕ್ಕೆ ಆಸರೆಯ ತಾಣವಾಗಿದ್ದಾರೆ. ಇವರಲ್ಲೊಂದು ಹವ್ಯಾಸ ಜನಪದಗಳ ಹಾಡು ಕಟ್ಟಿ, ಹಾಡುವುದು. ಅದೇನೋ ಹೇಳತೀವಲ್ಲ ನಾವುಗಳೂ ಎಸ್ಟೆಂಪೊರೆ ಸಿಂಗರ್ (ಆನ್ ಸ್ಪಾಟ್ ಕ್ರಿಯೇಟರ್). ಮೊನ್ನೆ ತಾನೇ ಮೂಡಿಬಂದ ನಿಮಗೊಂದು ಸಲಾಮು ಕಾರ್ಯಕ್ರಮದ ಭಾಗವು ಇವರಾದರು (TV9 ಕನ್ನಡ ಮಾಧ್ಯಮದಲಿ ಮೂಡಿ ಬರುವ ಕಾರ್ಯಕ್ರಮ).

ಇವರೇ ನಮ್ಮ ಪ್ರೀತಿಯ ಅಜ್ಜಿ. –ಗುರಮ್ಮ ಸಂಕಿನ.

ಎಲ್ಲದರಲ್ಲೂ ಇದರ ಪಾತ್ರವು ಒಂದು, ಇಲ್ಲಿನ ಜ್ಞಾನ ಮುದ್ರದ ಭಂಡಾರದಂತಿರುವ ಶಾಲಾಕಾಲೇಜುಗಳು, ಇದರ ಕೊಡುಗೆಯು ಅಪಾರ, ಇವೆಲ್ಲಾ ನಮೆಲ್ಲರ ಬೆಳಕಿನ ಜ್ಞಾನ ಸಂಕೇತ.

ನಮ್ಮದಿದು ನಮ್ಮದಿದು ಸುಂದರ ಶಾಲೆ,

ಕಲಿಯಲು ಚೇತನ ಹೊಸಬಾಳಿಗೆ ಸಾಧನ,

ಇಲ್ಲಿ ಕಲಿತ ಮಕ್ಕಳೇ ಎಂದೆಂದಿಗೂ ಪಾವನ,

ಎಂದೆಂದಿಗೂ ಪಾವನ.

ಒಂದೇ ಹೇಳೋದಾದರೆಎನ ಇಲ್ಲಾ ಇಲ್ಲಿ, ಏನ ಎಲ್ಲಾ ಇಲ್ಲಿ, ಎಂಬುವ ಮಾತುಗಳೇ ಇಲ್ಲಾ ಇಲ್ಲಿ.

ಬೆಳಗಿನ ಆ ಮುಂಜಾನೆಯ ಘಂಟೆ ನಾದದಿಂದ ಸಾಗುವ ನಮ್ಮೆಲ್ಲರ ದಿನಚರಿ. ಈ ಘಂಟೆ ನಾದ ನಮ್ಮ ಗುರುಹಿರಿಯರ ಕಾಲದಿಂದ ಸಿಕ್ಕಿರುವ ನಮ್ಮಿ ಸೌಭಾಗ್ಯ.

ಕೋಳಿಯ ಕೂಗಿನ ರಾಗದಲಿ,

ಈ ನಾದವೇ ಒಂದು ತಾಳ.

ಇದೇ ಬೆಳಗಿನಾ ಸಂಯೋಜನೆ.

ಇಲ್ಲಿ ಆಗುವ ಸಂಭ್ರಮದ ಆಚರಣೆಗೆ ಸರಿಸಾಟಿ ಇನ್ನ ಎಲ್ಲಿಯೂ ಇಲ್ಲಾ, ಇದು ನಮ್ಮವಳಗೊಂದು ಖುಷಿ, ಹೊರಗೊಂದು ಖುಷಿ ಕಷ್ಟಗಳ ದಾರಿಯಲಿ ಪೌಷ್ಠಿಕತೆಯು ಈ ಸಂಭ್ರಮ.

ಹೀಗೊಂದು ನೋಟ

ಆ ಊರ ಹೊರಗಿನ ಬೆಟ್ಟದ ತುದಿಯ ಮೇಲಿರುವ, ಆ ಆಂಜಿನೇಯ ಸ್ವಾಮಿಯೇ ನಮಗೆಲ್ಲಾ ಕಣ್ಣಗಾವಲು, ಆ ಜೋಡಿ ಕೆರೆಗಳು ತುಂಬಿದರೆ ಸಾಕು ಅದ್ಭುತದ ಭಾವಚಿತ್ರಕ್ಕೆ ಸಾಕ್ಷಿ, ಮಳೆಗಾಲದಲಿ ಆಗುಂಬೆಯೇ ಹೌದು ನಮ್ಮಲ್ಲಿನ ಹೇಸುರುವಾಸಿ ಈ ನಾಮಾಂಕಿತದ ಪಡಿಗೇರಿ. ನಮ್ಮೂರಿನ ತುಂಗದಾನಾಗಳಲಿ ಒಂದಾದ ಕಣ್ಣಿಯರ ಭಾವಿ, ಇದು ಸಿಹಿ ನೀರಿನ ಅಚ್ಚು.

ನಮ್ಮೂರಿಗೆ ಕೋಟೆಯು ಹೌದು ಈ ಶೃಂಗಾರದ ಬೆಟ್ಟಗುಡ್ಡಗಳು. ಎಲ್ಲದಕು ಮಿಗಿಲಾಗಿರು, ಸಪ್ತ ದ್ವಾರಗಳಲಿ ದಾಟಿ ಇರುವ ಆ ಕರುಣಾ ಮೂರ್ತಿ ಶ್ರೀ ಸಿದ್ದೇಶ್ವರನ ಗರ್ಭಗುಡಿ. ತುಸು ದಾರಿ ದಾಟಿದರೆ ಸಾಕು. ದಕ್ಷಿಣ ಕಾಶಿಯೇ ಎಂದು ಪ್ರತೀತ ತಾಯಿ ಬನಶಂಕರಿ ದೇವಿ, ತುಸು ದೂರದಲಿ ಕೂಡಾ ಆ ವಚನಗಳ ಸಾಹಿತ್ಯದ ಕೂಡಲ ಸಂಗಮ, ವಚನ ಸಾಹಿತ್ಯದ ಪಿತಾಮಹ ಬಸವಣ್ಣರ ನಾಡು, ಆ ಹೆಮ್ಮೆಯ ನೇರಳೆ ನಮ್ಮೆಲರ ಮೇಲಿರಲಿ.

ಆ ಸಮ್ಮಿಲನಗಳ ದಾರಿಯಲಿ ಬರುವ ಮತ್ತೊಂದು ಮಹಿಮಾ ಮೂರ್ತಿಯೇ , ಶ್ರೀ ಗುರು ಲಿಂಗಯ್ಯಕ್ಕೆ ಚನ್ನವೀರ ಸ್ವಾಮಿ,ಇವರು ನಡೆದು ಬಂದ ದಾರಿಯು ಕೂಡಾ ಸರಳತೆಯ ಸಂಕೇತ. ನಮಗೆಲ್ಲಾ ಈ ಎರಡು ಮೂರ್ತಿಯು ಮಾತೃಪಿತೃವಿನಷ್ಟು ಸಮಾನರು.

ಇಲ್ಲದಾ ರೂಪದೊಳು ಅದ್ದಿದಾ ದೇವಾ!

ಹುಟ್ಟು ಸಾವು ಒಂದೇ ಏನೋ

ನೀ ಹೇಳೋ ಓ ಮನುಜ.

ಅಟ್ಟಡವಿ ಅಂಜಿಕಿಯು ನಿನಗೇಕೊ

ನೀ ಹೇಳೋ ಓ ಮನುಜ.

ಬಡತನ ಸಿರಿತನ ಕಳೆದಹೋಯತು

ನೀ ಹೇಳೋ ಓ ಮನುಜ.

ಪ್ರೀತಿ ತ್ಯಾಗ ಒಂದೇ ಏನೋ

ನೀ ಹೇಳೋ ಓ ಮನುಜ.

ಬಂದುಗಳು ಬಂದಾಯ್ತು,

ತನ್ನವರು ಎನ್ನವರು, ಏನಗಿಲ್ಲಾ ನೋಡಯ್ಯ ಓ ಮನುಜ.

ದಯಮಾಡು ಇನ್ನ ಏನು

ಮುಳುಗೋ ಸೂರ್ಯ ಹೊರಟಾಯ್ತು,

ಕೆನೆ ಹಾಲು ಹಸಿ ತುಪ್ಪಾ

ನಿನಗಿಂದು ಎಡೆಯಾಯ್ತು.

ನೀ ಹೇಳೋ ಓ ಮನುಜ, ಇದೆಲ್ಲಾ ಸಾತ್ವಿಕತೆಯ ಸಂಕೇತ.

ಬನ್ನಿ ಮತ್ತೆ ಮುಖ ಪುಟಕೆ

ನಮಗಿದರ ಅರಿವು ಇರಬೇಕು, ಊರು ಇಂದಾಕ್ಷಣ ಪೌರಾಣಿಕಿಕತೆಯ ಒಂದು ಕಹಳೆಯೇ ಇರಬೇಕು, ಇಲ್ಲೂ ಉಂಟು ಈ ಕಹಳೆಯಾ ನಂಟು. ಪೌರಾಣಿಕ ಮತ್ತು ಸಾಂಸ್ಕೃತಿಕ ಪ್ರಶಂಶಗೆ ಮತ್ತೊಂದು ನಿಲುವು, ಇಲ್ಲಿ ಆಗುವ ಜಾನಪದ ಸಾಹಿತ್ಯದ ಕಾರ್ಯಕ್ರಮಗಳ ಪಟ್ಟಿಯ ಸಾಲು ಸಾಲುಗಳು. ಹೊನಲಿನ ಜಾನಪದ ಪದಗಳು, ಪುರಾಣಿಕತೆಯ ಸಾರುವ ನಾಟಕಗಳು, ಮತ್ತೆ ಮಿಗಿಲಾಗಿ ಸಾಗುವ ಜಂಟಿ ಪಗಡೆ ಪಂದ್ಯಗಳು. ಈ ಸೊಬಗಿನ ಅಂದ ಸವಿದರೆ ಚಂದ. ಇದರಂತೆಯೇ ಸಾಗುವ ಕ್ರೀಡಾ ಹುಚ್ಚು ಕಬ್ಬಡಿ,ಕ್ರಿಕೆಟ್,ಕುಸ್ತಿ ,ಬಂಡಿ ಓಟ, ಕಲ್ಲ ಎತ್ತುವ ಹುಮಸ್ತು, ಹೀಗೆ ನೂರಾರು. ಜೀವನದ ಬಂಡಿಯಲಿ ಆಗುವ ಅದ್ದೂರಿ ಕ್ಷಣಗಳು.

ನೋಡ್ರಿ ಸ್ವಾಮಿ,

ಕುಡಿನಡೆದರೆ ಸಂಸಾರ,

ಹೊಂದಾಣಿಕೆಯೇ ಸಂತಸದ ಸಹಬಾಳ್ವೆ,

ಇದರೊಂದಿಗೆ ನಮ್ಮೆಲರ ಸಹಕಾರ.

ಹೆದ್ದಾರಿಯ ಮೇಲೊಂದು ಅಗಸಿ, ಶಿರಿಯೂರಿನ ಅಗಸಿ,ಇಂತೆಯೇ, ಊರಿಗೊಂದು ಹೆದ್ದಾರಿ, ಊರಲ್ಲಿಯೂ ಹೆದ್ದಾರಿ ಹಾವಳಿ,ಇದೆಲ್ಲಾ ಗ್ರಾಮಾಭಿರುದ್ದಿಯ ಸಹಕಾರಿ, ಒಟ್ಟಾರೆ ಅಚ್ಚುಕಟ್ಟಿನ ಸರಿದಾರಿ.

                                                                                                     ಇಂತಿ ನಿಮ್ಮಿ ಈ ಬಂಧು.

                                                                                                                  @ದಿlip

ಜಿ.ಪಿ.ರಾಜರತ್ನಂ

431-g-p-rajarathnam1                                                            – ನಮ್ಮಲ್ಲಿನ ಒಂದು ಸಿಹಿ ಮುತ್ತು.                

ಜಿ. ಪಿ. ರಾಜರತ್ನಂ
ಡಿಸೆಂಬರ್ 5 ಕನ್ನಡಕ್ಕಾಗಿ ಅಪಾರವಾಗಿ ದುಡಿದ ಜಿ.ಪಿ. ರಾಜರತ್ನಂ ಅವರು ಹುಟ್ಟಿದ ದಿನ.  ಗುಂಡ್ಲು ಪಂಡಿತ ರಾಜರತ್ನಂ ಅವರು ಹುಟ್ಟಿದ್ದು ಡಿಸೆಂಬರ್ 5, 1908.   ನಾವು ಎಷ್ಟೇ ವಯಸ್ಸಿನವರಿರಬಹುದು, ಜಿ.ಪಿ. ರಾಜರತ್ನಂ ಅವರು ನಮಗೆ ನಾವು ಪುಟ್ಟವರಿದ್ದಾಗ ಉಣಬಡಿಸಿದ್ದ ‘ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ’, ‘ಒಂದು ಎರಡು ಬಾಳೆಲೆ ಹರಡು’, ‘ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು ಸಂಪತ್ತು’, ‘ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ’, ‘ರೊಟ್ಟಿ ಅಂಗಡಿ ಕಿಟ್ಟಪ್ಪ, ನನಗೊಂದು ರೊಟ್ಟಿ ತಟ್ಟಪ್ಪ’, ‘ಅಪ್ಪಾ ನಾಕಾಣಿ, ಯಾಕೋ ಪುಟಾಣಿ, ಹೇರ್ ಕಟ್ಟಿಂಗ್ ಸೆಲೂನ್’  ಈ ಪದ್ಯಗಳು ಈಗಲೂ ಅಷ್ಟೇ ಮುದ ನೀಡುತ್ತವೆ ಅಲ್ಲವೇ?  
ಜಿ.ಪಿ. ರಾಜರತ್ನಂ ಅವರ ಒಂದು ಪದ್ಯದ ಸಾಲು ಹೀಗಿದೆ. 
“ಆಚೆ ಜಡೆ, ಈಚೆ ಜಡೆ,
ನಡುವೆ ಊವಿನ ಸೇತುವೆ”
‘ಸೇತುವೆ’ ಪದ ರಾಜರತ್ನಂಗೆ ಪ್ರಿಯ, ವಿಶೇಷ ಅರ್ಥವುಳ್ಳದ್ದು.  ವಿಭಿನ್ನ ವಿಚಾರಗಳ ನಡುವೆ, ಕ್ಷೇತ್ರಗಳ ನಡುವೆ, ಬಣಗಳ ನಡುವೆ, ಮಾರ್ಗಗಳ ನಡುವೆ, ಯುಗಗಳ ನಡುವೆ, ಜನಕೂಟಗಳ ನಡುವೆ, ಮತ ಧರ್ಮಗಳ ನಡುವೆ, ಒಲವುಗಳ ನಡುವೆ, ರುಚಿಗಳ ನಡುವೆ, ವ್ಯಕ್ತಿಗಳ ನಡುವೆ, ವಯೋತಂಡಗಳ ನಡುವೆ ಸಂಪರ್ಕ ಅಗತ್ಯ ಅಲ್ಲವೇ?  ರಾಜರತ್ನಂ ಅಂಥ ಸೇತುವೆ ಆಗಿದ್ದರು.  
ರಾಜರತ್ನಂ ಹಳೆಗನ್ನಡದಲ್ಲಿ ಪರಿಣತರು.  ಜೊತೆಗೆ ಹೊಸಗನ್ನಡದ ನಾನಾ ಅಲೆಗಳ ಆಟವನ್ನು ಕಂಡಿದ್ದರು.  ಹಾಗಾಗಿ ಹಳೆ-ಹೊಸಗನ್ನಡದ ನಡುವೆ ಸೇತುವೆ ಆದರು.  ಎಳೆಯ ಮಕ್ಕಳಿಗೆ ಅಗತ್ಯವಾದ ತಿಳಿಯಾದ ಸಾಹಿತ್ಯವನ್ನು ರಚಿಸಿಕೊಟ್ಟರು.  ಬೆಳೆದವರ ಗಟ್ಟಿಹಲ್ಲಿಗೆ ತಕ್ಕುದಾದ ಪುಷ್ಟಿಕರ ವಿಚಾರದ ಉಂಡೆಗಳನ್ನು ಕಟ್ಟಿಕೊಟ್ಟರು.  ಹಾಗೆಯೇ ದೊಡ್ಡವರ ಮೆಲುಕಿಗೆ ಚಿಂತನೆಯ ಗ್ರಾಸವನ್ನು ಒದಗಿಸಿದರು.  ಹೀಗೆ ಮಕ್ಕಳಿಂದ ಮುದುಕರವರೆಗೆ ಸೇತುವೆ ಆದರು.  
‘ಸರ್ವಧರ್ಮ ಸಮನ್ವಯ’ ಅವರು ನಂಬಿದ್ದ ಇನ್ನೊಂದು ಮೌಲ್ಯ.  ವೇದೋಪನಿಷತ್ತಿನ ವಾಕ್ಯಗಳು, ಬುದ್ಧ-ಅಶೋಕರ ಮಾತುಗಳು, ಗಾಂಧೀ ವಾಣಿ ಹಾಗೂ ಸತ್ಯಸಾಯಿಯವರ ಮಾತುಗಳು ಎಲ್ಲವೂ ಅವರಿಗೆ ಈ ನಿಟ್ಟಿನಲ್ಲಿ ಬಲವಾದ ಆಧಾರವನ್ನು ಒದಗಿಸಿದ್ದವು.  ಅಂತೆಯೇ ಅವರು ಜಗತ್ತಿನ ನಾನಾ ಧರ್ಮಗಳನ್ನು ಸಮಾನಾಸಕ್ತಿಯಿಂದ ಶ್ರದ್ಧೆಯಿಂದ ಅಧ್ಯಯನ ಮಾಡಿದರು.  ಜನತೆಗೆ ತಿಳಿಯ ಹೇಳಿದರು.  ಮತಗಳ ಮಳೆಬಿಲ್ಲನ್ನು ಕಟ್ಟಿ ತೋರಿಸಿದರು.  ಮತ ಮತಗಳ ನಡುವೆ ಸಂಪರ್ಕ ಸೇತು ಆದರು.  
ಸಾಹಿತ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖ ಎನಿಸಿಕೊಂಡ ಅವರ ಸಂಪರ್ಕದ ಮಹತ್ವಪೂರ್ಣ ಕಾರ್ಯವೆಂದರೆ ಸಾಹಿತ್ಯ ಪರಿಚಾರಿಕೆಯ ಕೆಲಸ.  ತಮ್ಮದು ಬೇರೆಯವರದು ಎಂಬ ಭೇದ ಇಲ್ಲದೆ ಎಲ್ಲರ ಸಾಹಿತ್ಯವನ್ನೂ ಅವರು ಜನರಿಗೆ ಪರಿಚಯ ಮಾಡಿ ಕೊಟ್ಟರು.  ‘ತಾ ಕಂಡ ಶಿವಪಥವ ಎಲ್ಲರಿಗೆ ತೋರ್ಪ’ ಶಿವಶರಣರಂತೆ ಅವರು ತಾವು ಸಾಹಿತ್ಯದಲ್ಲಿ ಕಂಡ ಬೆಳಕನ್ನು ಸವಿದ ಸ್ವಾರಸ್ಯವನ್ನು ನಾಡಿಗೆಲ್ಲ ಹಂಚಲು ಹೆಣಗಿದರು.  ಇದರಿಂದಾಗಿ ರಾಜರತ್ನಂ ಸಾಹಿತಿಗಳಿಗೂ ಜನಕ್ಕೂ ನಡುವೆ ಸೇತುವೆ ಆಗಿದ್ದರು.  ನವೋದಯ ಕಾಲದಲ್ಲಿ ಕನ್ನಡ ಸಾಹಿತ್ಯವನ್ನು ಜನತೆಯ ಹತ್ತಿರಕ್ಕೆ ಕೊಂಡೊಯ್ದು ಮುಟ್ಟಿಸುವ ಕೆಲಸ ಏನಿದೆಯೋ  ಅದರಲ್ಲಿ ಭೀಮಪಾಲು ಜಿ.ಪಿ.ರಾಜರತ್ನಂ ಅವರದು.
ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿ, ‘ನೋವೆಲ್ಲ ಪಾವಕ’ ಎನ್ನುವುದು ಜಿ.ಪಿ. ರಾಜರತ್ನಂ ಅವರಿಗೆ ಪ್ರಿಯತತ್ವ.  1931ರಲ್ಲಿ ಅವರು ಕನ್ನಡ ಎಂ.ಎ. ಮುಗಿಸಿದರು.  ಕೆಲಸಕ್ಕಾಗಿ ಅಲೆದರು.  ಅಲ್ಲಲ್ಲಿ ಸಣ್ಣ ಮಾಸ್ತರ ಹುದ್ದೆ ನಡೆಸಿದರೂ ಜೀವನದ ಭದ್ರತೆ ಇಲ್ಲದೆ ಅಲೆಯುತ್ತಾ  ಬೆಂಗಳೂರಿನ ಜನಗಣತಿ ಕಚೇರಿಯಲ್ಲಿ ವಿಂಗಡನಾ ಗುಮಾಸ್ತೆಯ  ಕೆಲಸಕ್ಕೆ ಪ್ರಯತ್ನಿಸಿದರು.  ಅಲ್ಲಿ ಅಧಿಕಾರಿ ಆಗಿದ್ದ ಮಾಸ್ತಿ ಅವರು ಜಿ.ಪಿ. ರಾಜರತ್ನಂ ಅವರ ಸಾಹಿತ್ಯದ ಚಟುವಟಿಕೆಯನ್ನು ಬಲ್ಲವರಾಗಿದ್ದರು.  ಸಾಹಿತ್ಯದ ಕೆಲಸವನ್ನೇ ಮುಂದುವರೆಸು ನಾನು ನೆರವು ನೀಡುತ್ತೇನೆ ಎಂದರು.  ಅದರ ಪರಿಣಾಮ ರಾಜರತ್ನಂ ಅವರ ಬೌದ್ಧ ಅಧ್ಯಯನ, ಅದರಿಂದ ಕನ್ನಡಕ್ಕೆ ಆದ ಲಾಭ ಬೌದ್ಧ ಸಾಹಿತ್ಯ ಹಾಗೂ ಸಾಹಿತಿ ರಾಜರತ್ನಂ! ‘ಚೀನಾದೇಶದ ಬೌದ್ಧ ಯಾತ್ರಿಕರು’, ‘ಧರ್ಮದಾನಿ ಬುದ್ಧ’, ‘ಬುದ್ಧನ ಜಾತಕಗಳು’ ಮುಂತಾದ ಬೌದ್ಧಕೃತಿಗಳನ್ನು ರಚಿಸಿದರು.  ‘ಭಗವಾನ್ ಮಹಾವೀರ’, ‘ಶ್ರೀ ಗೋಮಟೇಶ್ವರ ‘, ‘ಮಹಾವೀರರ ಮಾತುಕತೆ’, ‘ಭಗವಾನ್ ಪಾರ್ಶ್ವನಾಥ’, ‘ಜೈನರ ಅರವತ್ತು ಮೂವರು’  ಮೊದಲಾದ ಜೈನ ಸಾಹಿತ್ಯವನ್ನೂ ಸೃಷ್ಟಿಸಿದರು.  ಮುಂದೆ ಅವರ ‘ಗೌತಮ ಬುದ್ಧ’ ಪಠ್ಯ ಪುಸ್ತಕವಾಯಿತು.
ಎಂ.ವಿ. ಗೋಪಾಲಸ್ವಾಮಿ ಶಿಶುವಿಹಾರದ ಮಾಸ್ತರಿಕೆಯ ಅವರ ಅನುಭವ ಎಳೆಯ ಮಕ್ಕಳು ಹಾಡಿಕೊಂಡು ನಲಿದು ಕುಣಿಯುವಂತೆ ಹಾಡುಗಳನ್ನು ರಚಿಸಲು ಪ್ರಚೋದಿಸಿತು.  ಪ್ರಖ್ಯಾತ ಪದ್ಯ ‘ತುತ್ತೂರಿ’ ಬಂತು.  ಅದೇ ಮಾದರಿಯ ‘ಕಡಲೆಪುರಿ’, ‘ಗುಲಗಂಜಿ’, ‘ಕಂದನ ಕಾವ್ಯಮಾಲೆ’ ಕೂಡಾ ಬಂದವು.  ಶಿವರಾಮ ಕಾರಂತರು ಪುತ್ತೂರಿನ ಬಾಲವನದಲ್ಲಿ ನಡೆಸುತ್ತಿದ್ದ ಮಕ್ಕಳ ಮೇಳದ ಅನುಭವಗಳಿಂದ ಈ ಶಿಶುಸಾಹಿತ್ಯ ರಚನೆ ಬಲಗೊಂಡಿತು.  ಕನ್ನಡದಲ್ಲಿ ಶಿಶುಸಾಹಿತ್ಯ ಪ್ರಕಾರವನ್ನು ರಾಜರತ್ನಂ ಪೋಷಿಸಿ ಬೆಳೆಸಿದರು.  ಖಾದಿಯ ಉಡುಪು ಅವರ ಬಾಳಿನ ವ್ರತವೇ ಆಗಿತ್ತು. ನೆಹರೂ ಅವರು ಮಾಡಿದ ಒಂದು ಭಾಷಣ ‘ಗಂಡುಗೊಡಲಿ’ಯಂಥ ಉತ್ತಮ ವಿಶಿಷ್ಟ ನಾಟಕಕ್ಕೆ ಪ್ರೇರಕವಾಯಿತು.  
ಮೈಸೂರಿನ ಹೆಂಡದ ಅಂಗಡಿಯ ದೃಶ್ಯಗಳನ್ನು ನೋಡಿ ರಾಜರತ್ನಂರಲ್ಲಿ ಉಂಟಾದ ಪ್ರತಿಕ್ರಿಯೆಯಿಂದ ‘ಎಂಡಕುಡುಕ ರತ್ನ’ ಎಂಬ ಅನನ್ಯ ಕೃತಿ ಹೊರಬರುವಂತೆ ಮಾಡಿತು.  ಆ ಪುಸ್ತಿಕೆಯ ಪ್ರಕಟಣೆಗೆ ಹಣ ಇಲ್ಲದೆ, ತಮ್ಮ ‘ತಾರೆ’ ಕವನಕ್ಕೆ ಕೊಟ್ಟಿದ್ದ ಬಿ.ಎಂ.ಶ್ರೀ ಚಿನ್ನದ ಪದಕವನ್ನೇ ಒತ್ತೆ ಇಟ್ಟು ಸಾಲ ಪಡೆದರು.  14 ಪದ್ಯಗಳ ‘ಎಂಡಕುಡುಕ ರತ್ನ’ ಕೃತಿಗೆ ಪುಟ್ನಂಜಿ ಪದಗಳು, ಮುನಿಯನ ಪದಗಳು ಸೇರಿಕೊಂಡು 77 ಪದಗಳ ‘ರತ್ನನ ಪದಗಳು’ ಕೃತಿ ಆಯಿತು.  ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ಆ ಪದಗಳು ಎಬ್ಬಿಸಿದ ಕೋಲಾಹಲ, ಪಡೆದ ಪ್ರಚಾರ, ಜನಪ್ರಿಯತೆಗಳು ಅಸೂಯೆ ಹುಟ್ಟಿಸುವ ಹಾಗಿದ್ದವು.  ‘ರತ್ನನ ಪದಗಳು’ ಅಂದಿನ ದಿನದಲ್ಲೇ ಸತತವಾಗಿ ಏಳೆಂಟು ಮುದ್ರಣ ಕಂಡು, ಇಂದಿಗೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿರುವ ಹತ್ತಾರು ಕನ್ನಡ ಪುಸ್ತಕಗಳಲ್ಲಿ ಒಂದು ಎಂಬ ವಿಕ್ರಮವನ್ನು ಉಳಿಸಿಕೊಂಡಿದೆ. ಕಂಚಿನಕಂಠದ ರಾಜರತ್ನಂ ಉತ್ತಮ ಸಾಹಿತಿ, ಉತ್ತಮ ವಾಗ್ಮಿ ಎಂದು ನಾಡಿನಲ್ಲೆಲ್ಲಾ ಹೆಸರಾದರು.  
1938ರಲ್ಲಿ ದೊರೆತ ಕಾಲೇಜು ಕನ್ನಡ ಪಂಡಿತ ಹುದ್ದೆ ರಾಜರತ್ನಂ ಅವರ ಬದುಕಿಗೆ ಸ್ಥಿರತೆಯನ್ನು ತಂದಿತ್ತಿತು.  ಅಲ್ಲಿಂದ 1964ರಲ್ಲಿ  ನಿವೃತ್ತರಾಗುವವರೆಗೆ ಮೈಸೂರು, ಶಿವಮೊಗ್ಗ, ತುಮಕೂರು ಮುಂತಾದ ಊರುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದಾನ ಮಾಡಿದರು.  ಅವರಲ್ಲಿ ಸಾಹಿತಾಸಕ್ತಿಯನ್ನು ತುಂಬಿದರು.  ನಿವೃತ್ತರಾದಾಗ ಅವರು ‘ಕನ್ನಡ ರೀಡರ್’.  ಆಮೇಲೆಯೂ ಒಂದೆರಡು ವರ್ಷ ಯು.ಜಿ.ಸಿ. ಅಧ್ಯಾಪಕರಾಗಿ ಕೆಲಸ ಮಾಡಿದರು.  ಅಲ್ಲದೆ ಇನ್ನೂ ಅಷ್ಟು ಕಾಲ ನ್ಯಾಷನಲ್ ಕಾಲೇಜು, ಎಂ.ಇ.ಎಸ್ ಕಾಲೇಜು, ಸತ್ಯಸಾಯಿ ಕಾಲೇಜುಗಳಲ್ಲಿ ನಾನಾ ವಿಷಯಗಳ ಬಗ್ಗೆ ಭೋಧನೆ ನಡೆಸಿದರು.
ಕಾಲೇಜಿನ ಕೆಲಸ ರಾಜರತ್ನಂ ಅವರ ಬದುಕಿನ ಇನ್ನೊಂದು ಪುಟವನ್ನು ತುಂಬಿತು.  ಅದೆಂದರೆ ವಿದ್ಯಾರ್ಥಿಗಳ ಸಾಹಿತ್ಯಕೃಷಿಗೆ ಪ್ರೇರಣೆ.  ವಿದ್ಯಾರ್ಥಿಗಳಿಂದ ಬರೆಯಿಸಿದ ಲೇಖನಗಳನ್ನು ಅಚ್ಚುಮಾಡಿ ಪ್ರಕಟಿಸಿದರು.  ‘ನಮ್ಮ ನಮ್ಮವರು’, ‘ವಿದ್ಯಾರ್ಥಿ ವಿಚಾರ ವಿಲಾಸ’, ‘ಗಂಧದ ಹುಡಿ’, ‘ನಮ್ಮ ಬೇಂದ್ರೆಯವರು’, ‘ಬಾಲ ಸರಸ್ವತಿ’, ‘ಹೂವಿನ ಪೂಜೆ’ ಇತ್ಯಾದಿಗಳು ಇಂತಹ ಕೃತಿಗಳು.  ಇದರಿಂದಾಗಿ ಹಲವಾರು ತರುಣರು ಸಾಹಿತಿಗಳಾಗುವುದಕ್ಕೂ, ನೂರಾರು ತರುಣರು ಸಾಹಿತ್ಯಸೇವಕರಾಗುವುದಕ್ಕೂ ಇಂಬು ದೊರೆಯಿತು.  ಇಂದು ಖ್ಯಾತನಾಮರಾಗಿರುವ ಹಲವಾರು ಸಾಹಿತಿಗಳು ಹಾಗೆ ತಯಾರಾದವರೇ.  ಸೆಂಟ್ರಲ್ ಕಾಲೇಜು ಕರ್ನಾಟಕ ಸಂಘ ಕನ್ನಡನಾಡಿನ ಹಳೆಯ ಸಾಹಿತ್ಯ ಸಂಸ್ಥೆಗಳಲ್ಲಿ ಒಂದು.  ಪ್ರೊ.ಎ. ಆರ್. ಕೃಷ್ಣಶಾಸ್ತ್ರಿ ಅವರು ಸ್ಥಾಪಿಸಿದ್ದು.  ರಾಜರತ್ನಂ ಅದಕ್ಕೆ ಜೀವಕಳೆ ತುಂಬಿದರು.  ಸುಮಾರು 30 ಕೃತಿಗಳನ್ನು ಸಂಘದಿಂದ ಪ್ರಕಟಿಸಿದರು.  ತಾವೇ ಹೊತ್ತು ತಿರುಗಾಡಿ ಮಾರಿದರು.  ಬೆಂಗಳೂರಿನ ಗೋಖಲೆ ಸಾರ್ವಜನಿಕ ಸಂಸ್ಥೆ, ಗಾಂಧೀ ಸಾಹಿತ್ಯ ಸಂಘ ಮೊದಲಾದ ಸಂಸ್ಥೆಗಳ ನಿಕಟ ಸಂಬಂಧ ಇಟ್ಟುಕೊಂಡಿದ್ದರು.  ಅಲ್ಲಿ ಹಾಗೂ ಇತರ ಅನೇಕ ಕಡೆಗಳಲ್ಲಿ ಸಾವಿರಾರು ಭಾಷಣಗಳಿಂದ ಸಾಹಿತ್ಯ, ಧರ್ಮ, ನೀತಿ ಇತ್ಯಾದಿ ವಿಷಯಗಳನ್ನು ಜನರಿಗೆ ತಿಳಿಯಹೇಳಿದರು.  
ಹಲವು ಕವಿ ಸಮ್ಮೇಳನಗಳ ಅಧ್ಯಕ್ಷತೆ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್, ಮಲ್ಲೇಶ್ವರದ ನಾಗರೀಕರಿಂದ ಪುಸ್ತಕ ಮಾರಾಟದ ನಿಧಿಯ ಅರ್ಪಣೆಯ ವಿಶಿಷ್ಟ ಸನ್ಮಾನ, ಎಲ್ಲಕ್ಕೂ ಕಿರೀಟ ಪ್ರಾಯವಾಗಿ 1978ರಲ್ಲಿ ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ – ಇವು ರಾಜರತ್ನಂ ಅವರಿಗೆ ಸಂದ ಗೌರವಗಳು.  1979ರ ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಟಿಯ ಅಧ್ಯಕ್ಷತೆಯೇ ಕೊನೆಯದು.
ರಾಜರತ್ನಂ ಅವರ ರತ್ನನ ಪದಗಳು ಕನ್ನಡ ಭಾಷೆಯ ಪೊಗರು, ಭಾವದ ನವಿರು, ಕಲ್ಪನೆಯ ಸೊಗಸು, ಛಂದಸ್ಸಿನ ವೈವಿಧ್ಯ ಎಲ್ಲವೂ ಸೇರಿ ಒಂದು ಅಮೂಲ್ಯ ಪಾಕವಾಗಿದೆ. ಅದರಲ್ಲಿರುವ ಜೀವನ ದರ್ಶನ, ಕುಡುಕನೆಂಬ ಹೀಯಾಳಿಕೆಗೆ ಒಳಗಾದ ಬಡವನೊಬ್ಬನ ಕಾಣ್ಕೆ, ಆತನ ನೋವು, ನಲಿವು, ಒಲವು, ಗೆಲವು, ಸೋಲು, ಜೊತೆಗೆ ಆರ್ಥಿಕ ವಿಷಮತೆ, ಶೋಷಣೆಗಳ ಬಗ್ಗೆ ಆಕ್ರೋಶದ ಪ್ರತಿಭಟನೆಯ ದನಿ, ಬದುಕಿನ ಬಗ್ಗೆ ನಲ್ಮೆಯ ನೋಟ, ಬಡವನ ಶೃಂಗಾರ, ಹಾಸ್ಯ ರಸಪ್ರಜ್ಞೆ, ಆ ಧಾಟಿ! ಕನ್ನಡದಲ್ಲೇ ಅಸಮಾನ!   ಇಂದು ದಲಿತ-ಬಂಡಾಯಗಳು ಸಾಹಿತ್ಯ ವೃಕ್ಷದ ಹೊಸ ರೆಂಬೆಗಳೆಂದುಕೊಂಡು ಚಿಗುರುತ್ತವೆ.  1930ರ ದಶಕದಲ್ಲೇ ‘ರತ್ನನ ಪದ’ದಲ್ಲಿಯೇ, ದಲಿತರ ದನಿಯನ್ನು, ಬಂಡಾಯದ ದನಿಯನ್ನು ಕೇಳಬಹುದಾಗಿದೆ.  ಇದಕ್ಕೆ ತಮ್ಮನ  ಹಾಗೆ ಬಂದ ‘ನಾಗನ ಪದಗಳು’ ಇಂಥದೇ ಪ್ರತಿಭೆಯ ಫಲ.  ಜೀವನ ದರ್ಶನ ಬೇರೆಯದು.  ಇಲ್ಲಿ ನೆಮ್ಮದಿಯ ಸಂಸಾರ ಚಿತ್ರಣವಿದೆ.  ಪ್ರಾಮಾಣಿಕವಾಗಿ ದುಡಿದು ಹೊಟ್ಟೆಪಾಡು ನಡೆಸಿಕೊಳ್ಳುತ್ತಾ, ಕಾಪೇಯ ಇಲ್ಲದಂತೆ ಬದುಕುತ್ತಾ ಹೆಂಡಿರು ಮಕ್ಕಳನ್ನು ಅಕ್ಕರೆಯಿಂದ ಸಾಕುತ್ತಾ, ಬಾಳಯಾನಕ್ಕೆ ನಂಬಿಕೆಯ ಚುಕ್ಕಾಣಿಯನ್ನು ಇಟ್ಟುಕೊಂಡು ಸಾಗುತ್ತ, ನಲಿವಿನಿಂದ ನಡೆಯುವವನ ಚಿತ್ರಣ ಇಲ್ಲಿದೆ.  ಈ ಎರಡೂ ಕೃತಿಗಳಲ್ಲಿ ರಾಜರತ್ನಂ ಅವರ ಸ್ವಂತಿಕೆ, ಪ್ರತಿಭೆ ಮಿಂಚಿವೆ. ‘ಪುರುಷ ಸರಸ್ವತಿ’ ಕಾವ್ಯವಂತೂ ವಿಡಂಬನ ಸಾಹಿತ್ಯಕ್ಕೆ ಸೊಗಸಾದ ಉದಾಹರಣೆಯಾಗಿ ನಿಂತಿದೆ.  
ರಾಜರತ್ನಂ ದೈಹಿಕವಾಗಿ, ಮಾನಸಿಕವಾಗಿ ಒಳ್ಳೆಯ ದಾರ್ಢ್ಯವನ್ನು ಪಡೆದಿದ್ದರು.  ಅಂಗಸಾಧನೆ ಮಾಡಿದ ಬಲವಾದ ಮೈಕಟ್ಟು, ಸವಾಲು ಹಾಕುವ ಹುರುಪು, ಅಧ್ಯಯನ, ಅನುಭವ, ಆತ್ಮಗೌರವ, ಅಭಿಮಾನಗಳ ವ್ಯಕ್ತಿತ್ವ ಅವರದಾಗಿತ್ತು. ಎಣೆಯಿಲ್ಲದ ಸೊಗಸಾದ ಭಾಷಣಕಾರರು, ಕಂಚಿನ ಕಂಠ.  1979ರ ಮಾರ್ಚಿ 11ರಂದು ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಿಂದ ಹಿಂದಿರುಗಿ ಬಂದು, ಮಾರ್ಚಿ 13ರ ಮಧ್ಯಾಹ್ನ ಒಮ್ಮೆಲೇ ಹೃದಯಾಘಾತಕ್ಕೆ ಒಳಗಾಗಿ ತಮ್ಮ ನೆಮ್ಮದಿಯ ನಾಡಿಗೆ ನಡೆದುಬಿಟ್ಟರು.
‘ರಾಜರತ್ನಂ ಸಾರ್’ ನಿಮ್ಮಂತಹವರು ಹೆಚ್ಚು ಹೆಚ್ಚು ಈ ವಿಶ್ವದಲ್ಲಿ ಉದಯಿಸುತ್ತಲಿರಲಿ ಎಂದು ಕನ್ನಡಿಗರು ನಿರಂತರ ಬೇಡುತ್ತಾರೆ. 
ಆಧಾರ:  ನೀಲತ್ತಹಳ್ಳಿ ಕಸ್ತೂರಿ ಅವರ ಜಿ.ಪಿ. ರಾಜರತ್ನಂ ಅವರ ಕುರಿತ ಲೇಖನ
ಫೋಟೋ ಕೃಪೆ: www.kamat.com
(‘ಕನ್ನಡ ಸಂಪದ’ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ ‘ಸಂಸ್ಕೃತಿ ಸಲ್ಲಾಪ’ ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಮರುಜನ್ಮದ ಬಹುರೂಪ.

selection_059

click here for  Money Gallery.

ಓ ದೇವರೇ,
ಅಂದು ನನ್ನನೇ ಬಯಸಿದವರು, ಇಂದು ನನ್ನ ಮರೆತಿಹರು. ಅಂದೊಮ್ಮೆ
ಆಡಂಬರದಲಿ ಇಟ್ಟಿಹರು, ಇಂದೇನೋ ಅವಘಡದಲಿ ತೋರದೆ ನನ್ನ.
ನನಗೆ ಆ ಅರ್ಹತೆ ಮೀರಿತೆ? ಇದೆ ಕಾಲಚಕ್ರವಾದರೆ ಬರುವುದೆಂದು ಆ ಪ್ರಾಮುಖ್ಯತೆ?

               ಇವರೆಲ್ಲೆ ಇಷ್ಟೇ ಇವರ ಸುಖ ದುಃಖಗಳಿಗೆ ನಾನೆ ಭಾಗೀ, ಆದರೆ
ಕೇಳುವವರ್ಯಾರೂ ನನ್ನ ಈ ದುಃಖಿ. ಬರುವೆ ನಾನು ಮರುರೂಪ ತಾಳಿ,
ತಿಳಿ ಹೇಳುವೆ ನಾನು ನಾನೆ ಎಂದು. ಇನ್ನಾದರೂ ತಿಳಿದುಕೋ ನನ್ನ ಈ
ಶ್ರೇಷ್ಠತೆಯ ಬಗ್ಗೆ . ಮಿತವ್ಯಯ ಇರಲಿ ನನ್ನೊಂದಿಗೆ, ಲೋಭಿತನಾಗದಿರು
ನನ್ನೊಂದಿಗೆ, ಅವಲಂಬಿತನು ನೀನು ಅಪಹಾಸ್ಯ ಮಾಡದಿರು.

         ನಿನ್ನ ಈ ಭಾದ್ಯತೆಗೆ ತಕ್ಕಸ್ಟು ನಾನಿರುವೆ ನಿನ್ನೊಂದಿಗೆ. ನಾ ಬಂದಿರುವುದೇ
ಬ್ರಷ್ಟಾಚಾರದ ನಿರ್ಮೂಲನೆಗೆ.

ಇಂತಿ,
ನಿಮ್ಮೆಲರ ಗೌರವದೊಂದಿಗೆ.                                                                                            -@ದಿlip

ಸಂಯುಕ್ತದ ಸಂಬಂಧ

  ಮಿಟುಕದೆ ನುಡಿಸು ಮಾನದ ರಾಗಗಳ,
  ತೊರೆದು ಹಾಕು ಆ ತಲ್ಲಣಗಳ ನೆನಪನ್ನ.
  ಹೊರಚೆಲ್ಲು ನನ್ನ ಆ ಹೊರೆ , 
  ಹರಿಬಿಡು ನಿನ್ನೀ ಈ ಹರುಸದಾ ನಗೆ.

           ಕಣ್ಣ ಕಂಬನಿಗಳ ದಾರಿ ತೊರೆದು ಹೋಗಿ,
           ನಿನ್ನ ಈ ಪ್ರೀತಿಯ ಪ್ರೇಮದಲಿ ಬಿದ್ದಿರುವೆ ನಾನೀಗ.
           ಕ್ಷಣ ಮಾತ್ರದಲ್ಲಿ ಪರಿಚಯಿಸುವೆ ನಿನ್ನನ,
           ನನ್ನ ಈ ಪ್ರೇಮದಾ ಲೋಕದಲಿ .

ಸವಿ ಗಾಳಿಯ ತಂಪು ಸಹಕರಿಸದೆ ಸಾಕು, 
ಸಿಗುವುದು ನೋಡಾ ಸಿಹಿ ಮುತ್ತಿನಾ ಸರಮಾಲೆ .
ಸಹನೆಯ ಮೀರಿ ಸಾಕಣ್ಣೆದರು, 
ಸರಿಬಿಡದು ನಿನ್ನೀ ಈ ಸಲ್ಲಾಪ .

         ಸವಿಗಾಳಿಗು ಸಹಿ ಹಾಕಿ, ಸರಿದೂಗದು ಸಮಯ.
         ಸಾಕು, ಸಾಕು, ಸಂಚಾರದ ಸುತ್ಹೋಲಯ ಸಾರಿದೆ. 
                      - ಇದು ನಮ್ಮಿ ಸಂಯುಕ್ತದ ಸಂಬಂಧ.
                                        @ದಿlip

ಬಾನುಲಿ ಸಡಗರ

ad3a7ec8d825efcaad19c6bb21b3e095

ಹರಿದಾವ ನೋಡಾ ಬಣ್ಣದಾ ಹಕ್ಕಿ,
ತೇಲಿ ಬಂದ ಮೋಡದಾ ಅಡಿಯಲಿ.
ತಿಲಿ ನೀಲಿ ಆಗಸದಡಿಯಲಿ
ಕಡು ಕಂಪು ಕಣ್ಣಿನಾ ಕೊಕ್ಕರೆ .
    |ಹರಿದಾವ ನೋಡಾ ಬಣ್ಣದಾ ಹಕ್ಕಿ.

ಮಡು ಮಂಜಿನಾ ಅಪ್ಪೆರೆಯಲಿ 
ಸುಳಿದಾವ ನೋಡಾ ಬಣ್ಣದಾ ಗುಂಪು .
ಕಣ್ಣ ತೆರೆದರೆ ಸಾಕು ಮುಡುವುದೂ ಹಬ್ಬದಾ ಸಡಗರ 
ಕಣ್ಮರೆಗೊಳುತಿದೆ ಬಾಣ ಎತ್ತರಕೆ ಹೋದರೆ .
    |ಸುಳಿದಾವ್ ನೋಡಾ ಚಿಲಿಪಿಲಿಯ ಹಕ್ಕಿ.

ಯಾರ್ ನಿನ್ನ ಕೊಡ್ಯದವರು ಅಗಸದಡಿಯಲಿ 
ಓ ಬಾನುಲಿ ಹಕ್ಕಿ, ಓ ಬಾನುಲಿ ಹಕ್ಕಿ 
    |ಸುಳಿದಾವ ನೋಡಾ ಆ ಬಾನಂಗಳದಾ ಹಕ್ಕಿ.

ಧರೆಗೆ ದುಮ್ಮಿಕ್ಕಿದರೆ ಸಾಕು 
ಮರದಡಿಯೇ ನಿನ್ನಿ ಈ ಮನೆ .
ಬಿತ್ತಿದಾ ಪೈರು ನಿನಗಿನ್ನು ಅಹ್ವಾನ.
    |ಸುಳಿದಾವ ನೋಡಾ ಸುಕುಮದಾ ಹಕ್ಕಿ.

ಯಾರ್ ಅಂಜಿಕಿಯೂ ನಿನಗಿಲ್ಲ 
ಯಾರ್ ಹಂಗು ನಿನಗಿಲ್ಲ 
ಮೋಡದಾ ಮರೆಯೆ, ನಿನ್ನವಳಗಿನ ಚಿತ್ತಾರ.
    |ಸುಳಿದಾವ ನೋಡಾ ಮಿನುಗುವಾ ಹಕ್ಕಿ.

ತೇಲಿದರೆ ಸಾಕು ಹಿಂಬಾಲಿಸಿದಂತೆ ಅನುಭವ
ಬಾಣ ಎತ್ತರದಾ ಹಕ್ಕಿ , ನೀ ಬಾಣ ಎತ್ತರದಾ ಹಕ್ಕಿ,
ಗುಣಿಗಿದರೆ ನೋಡಾ , ನಿನ್ನ ಈ ವಾದ್ಯ 
ಹಟಿ ಹಟಿ ಚಿಟಿ ಚಿಟಿ .
    |ಸುಳಿದಾವ ನೋಡಾ ಚಿಟುಗುಬ್ಬಿ .
–ಬಣ್ಣದಾ ಹಕ್ಕಿಯ ಮುರುದ್ವನಿಯ ಸ್ವರೂಪ್.                                                            

                                                                                                      @ದಿಲೀಪ

 

ಎಸ್. ಎಲ್. ಭೈರಪ್ಪನವರ ಜನ್ಮದಿನ

 

13907022_10209052972174226_3528791199601513352_n
S.L.Bhairappa

ಇಂದು ನೆನೆದೊಡನೆ ಮನದಲ್ಲಿ ಗೌರವಾದರದ ಪಲುಕೆಬ್ಬಿಸುವ ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜ ಎಸ್. ಎಲ್. ಭೈರಪ್ಪನವರ ಜನ್ಮದಿನ. ಆ ಪ್ರಯುಕ್ತ ಅವರ ಕಾದಂಬರಿ ಮತ್ತು ಆತ್ಮಕಥೆಯ ಹೆಸರುಗಳನ್ನೂ ಜೋಡಿಸಿ ಪೋಣಿಸಿದ ಒಂದು ನುಡಿ ನಮನ ಪದ್ಯ – ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ !

ಭೀಮಕಾಯನ ಯಾನ !
________________________________

ಶತ -‘ಗತಜನ್ಮ’ಗಳ ಪುಣ್ಯ ವಿಶೇಷ
‘ಭೀಮ ಕಾಯ’ ಜನಿಸಿದ ಕನ್ನಡ ದೇಶ
ತಟ್ಟನೆ ‘ಬೆಳಕು ಮೂಡಿತು’ ನಾಡಿನ ತುಂಬ
ಕಾಲಿಟ್ಟಳು ‘ಧರ್ಮಶ್ರೀ’ ಜಗದಾನಂದ..

‘ದೂರ ಸರಿದರು’ ಸೃಜಿಸಿದ ಪಾತ್ರಗಳಿಂದ
ಸೂಕ್ತ ‘ಮತದಾನ’ ಮಾಡುತ ನಿಷ್ಠೆಯಿಂದ
ಚಿಗುರೊಡೆದಂತೆ ಸಸಿಯರಳಿಸಿ ‘ವಂಶವೃಕ್ಷ’
‘ಜಲಪಾತ’ದೊಂದಿಗೆ ಧುಮ್ಮಿಕ್ಕಿ ಕಲಾ ಸುಭಿಕ್ಷ..

ಕಾಡಿದ್ದುಂಟು ಉದ್ದ ನೂರಾರು ‘ನಾಯಿ ನೆರಳು’
‘ತಬ್ಬಲಿಯು ನೀನಾದೆ ಮಗನೆ’ ಅಂದವೆಷ್ಟೊ ಕೊರಳು
‘ಗೃಹಭಂಗ’ವಾದಿತೆಂದಾಶಿಸಿ ಕಾದವರಿಗೆಯೆ ಮಾಯೆ
‘ನಿರಾಕರಣ’ ಕಾಡಿತ್ತು ಹಿಡಿಸುತ್ತ ‘ಗ್ರಹಣ’ದ ಛಾಯೆ..

ಕ್ರಮಿಸಿದ ಹಾದಿ ಘಾಟು ಬಿಡದೆ ನಡೆದೇ ‘ದಾಟು’
ಮಾಡುತ್ತುದ್ದಕು ‘ಅನ್ವೇಷಣೆ’, ‘ಪರ್ವ’ದೊಳಡಗಿಹ ‘ನೆಲೆ’
ಹುಡುಕಿದ್ದೇನೆಲ್ಲ ‘ಸಾಕ್ಷಿ’, ಒತ್ತಾಸೆ ಅಂತಃಸಾಕ್ಷಿ, ಮನಃಸಾಕ್ಷಿ
‘ಅಂಚು’ ಅಂಚಿನ ‘ತಂತು’ ಮಿಡಿದು ‘ಸಾರ್ಥ’ಕತೆ ‘ಮಂದ್ರ’ದಲಿ..

ಪರಿಪಕ್ವತೆ ಪ್ರಬುದ್ಧತೆ ನೈಜ ಚರಿತ್ರೆ ತೆರೆದಿಟ್ಟ ‘ಆವರಣ’
‘ಕವಲು’ ಹಾದಿಯ ನಡಿಗೆಯ ಪ್ರತಿಹೆಜ್ಜೆಯು ಭಿನ್ನ
ಖಂಡಾಂತರವಲ್ಲ ಲೋಕಾಂತರ ಬ್ರಹ್ಮಾಂಡ ‘ಯಾನ’
ಅನುಭವದ ‘ಭಿತ್ತಿ’ ತೆರೆದಿಟ್ಟ ಆತ್ಮಕತೆಯ ಅನಾವರಣ !

shared from  fb – ನಾಗೇಶ ಮೈಸೂರು
(ಭೈರಪ್ಪನವರ ಕಾದಂಬರಿ ಕೊಲೇಜ್)

August 15

ಬಂದುಗಳೆ , ನನಗೆ ಏಕೋ, ಏನೋ ಕಳವಳಗೊಂಡತೆ ಆಗುತಿದೆ, ಇಂದು ನಮಗೆಲ್ಲಾ  ಸ್ವಾತಂತ್ರ್ಯ ದಿನವೇ ಹೌದು, ಅಂದು ನಾ ಕಂಡ ಕನಸು ಎಂದವರು ನಮ್ಮ್ ಹಿರಿಯರು ಇಂದು ನನಸಾಗಿ ಹೋಯಿತು. ಅದೇ ಸ್ವಾತಂತ್ರ್ಯ. ನಾವೆಲ್ಲ ಆ ಕಷ್ಟಗಳ ದಿನಗಳ ನೆನದುಹಾಕಿ ಇವತ್ತು ಸಿಹಿ ಮಾತುಗಳನ್ನಾಡತಿದಿವಿ ಅಂತಾ ಅನುಕೊಬಹುದೆ ವಿನಹ ತಾರತಮ್ಯ ಹೊಗಿಲ್ಲಾ, ಯಾಕ್ ಈ ಶಿಕ್ಷೆ, ಯಾಕೆ ಈ ಹೊಡೆದಾಟ. ನಮ್ಮ ಕನ್ನಹನಿಗಳ  ನಮ್ಮ ಬಾಯಾರಿಕೆ ಹೋಗಲಾಡಿಸಲು ಸಾಧ್ಯವಾ! ನಿಜಕ್ಕೂ ಅರ್ಥವಿನವಾದದ್ದು ಈ ವಾಕ್ತೊತಿ. ಈ ಮಾತು ಏಕೆ ಅಂದರೆ, ಈ ಮಹಾ-ದಾಯಿ ಮತ್ತು  ಕಲಸಾ- ಬಂದೊರಿಗಾಗಿ. 

ನಮ್ಮ ಈ ರೈತರ, ರಕ್ತ್ ಹೆಪ್ಪುಗಟ್ಟಿ  ಹೊರಚೆಲ್ಲಿದರು. ಬಗೆಹರಿಯದ ಸಮಸ್ಯೆಯೇ ಆಯಿತು. ಇವರೆಲ್ಲಾ ನಮ್ಮವರು ನಮ್ಮ ಜೊತೆಯಲ್ಲೇ ಇರುವರು. ನಮ್ಮ ಕಷ್ಟದ ನೋವುಗಳ ಬಲ್ಲವರು. ಇವರ ಆಳ್ವಿಕೆ ಆರ್ಭಟದಲ್ಲಿ ಸೇವೆಯ ಬಾವನಯೆ ಮರೆತು ಹೋಗಿದ್ದಾರೆ. ರಕ್ಷಣೆಯೆ ಇಲ್ಲಿ ರಾಕ್ಷಸತಾಂಡವ  ಆಡುತಿದೆ. 

 ನಾವು ಕೇಳಿದ್ದು ಬಂಗಾರವು ಅಲ್ಲ, ಕ್ಷೀರವು ಅಲ್ಲ,  ಎಲ್ಲಿಂದಲೂ ಬರುವ ಆಮದು ಅಲ್ಲ, ಬಾಯಾರಿಕೆಯ ನೀರು ಮಾತ್ರ್.  ಇದು ನಮ್ಮಲಿದೆ, ನಮ್ಮ ಮನೆಯ ಸ್ವತ್ತು  ಎಂದರು ತಪ್ಪಾಗಲ್ಲ್. ಇದಕೊಸ್ಕರ ನಾವು ೧ ವರ್ಷ ಪಟ್ಟುಹಿಡಿದರು ಸರಿ ಹೂಗಲಿಲ್ಲ ಆದರು ನಮಗೆ ಕೂನೆಗೆ ಆದದ್ದು. ಆ ಬ್ರಿಟಿಷರು ಬಿಟ್ಟು ಹೂದ ಆ ಲಾಠಿ ಏಟು, ಆ ಉದ್ದಟತನದ ಮಾತುಗಳೆ. 

ಆ ಘಟನೆಗಳ ನೋಡಿದರೆ, ನಮ್ಮೂಳಗಿನ ಮನಸು ಕುದಿಯುತ್ತೆ. ಆ ನೂಂದವರ ಕಷ್ಟ ಎಷ್ಟು ಅಂತ. ಒಂದು ಕ್ಷಣ ತಲ್ಲನವಾಗುತ್ತೆ, ನಾವು ಇರೋದು ಸಂವಿಧಾನಗಳ ಕಟ್ಟುಪಾಡುಗಳ ನಡುವೆ ಇರುವ ಸ್ವತಂತ್ರ  ಭಾರತಮಾತೆಯ ಮಡಿಲಲ್ಲಿ  ಅಥವಾ  ಇನ್ನೆಲ್ಲೂ. 

ದಯವಿಟ್ಟು  ಒಂದೇ ಒಂದು ಕ್ಷಣ, ಆ ತಲ್ಲನಗಳ ನೋಡಿ  , ಪೆಟ್ಟು  ಆಗಿದ್ದು  ಯಾರಿಗೆ ಅಂತ, ಅದು ಬೇರೆ ಯಾರಿಗೂ  ಅಲ್ಲಾ. ನಮ್ಮ ಬೆನ್ನಲುಬಿಗೆ. ಅಂದರೆ ದೇಶದ ಬೆನ್ನಲಬು ಅಂತ ಕರಿತಿವಿ ಅಲ್ಲ್ವಾ ಆ ರೈತನಿಗೆ. ಈ ಮಾತಲ್ಲಿ ಕರಿತಿದ್ವಿ ಅಲ್ಲ ಅಂದೇ, ಆದರೇ  ಇದು ನಿಜದ ಸಂಗತಿಯೀ  ಅನ್ನೂದೆ ಗೊತ್ತ ಆಗತಿಲ್ಲ.

ಕೂನೆಯದಾಗಿ ನಾನು ಹಂಬಲಿಸುವದು ಒಂದೇ, ಈ ಅಮೂಲ್ಯವಾದ ಕೆಲಸ ಯಾರ ಹಸ್ತ ಕ್ಷೇತ್ರದಲ್ಲಿ ಇದೆಯೂ ಅವರು ನೆರವೆರಿಸಿದರೆ ಸಾಕು. ಈ ಕೂಗು ನಿಮಗೆ ಕೇಳಿದೆ ಅಂತ ಭಾವಿಸಿದ್ದೇನೆ. 

ಕ್ಷಮೆ ನಮ್ಮದಾಗಿರಲಿ ಕರುಣೆ ನಿಮ್ಮದಾಗಲಿ.
ಜೈ ಭಾರತ ಮಾತಾಕಿ, ಜೈ ಕನ್ನಡಾಂಬೆ.

#4Hage Sumwne

​*ಹಳೆಯ ಕಾಲದ ಹೆಂಚಿನ ಮನೆಯಲ್ಲಿ*
*ಕೊತಕೊತನೆ ಕುದಿದು*

*ಆವಿಯಾಗಿ ಹೋಗುತಿದ್ದ ದುಃಖ*
*ಈಗಿನ ಕಾಲದ ತಾರಸಿ ಮನೆಯಲ್ಲಿ*
*ಕುಕ್ಕರ್‌ನಲ್ಲಿ ಒಳಗೊಳಗೇ*
*ಬೆಂದು ಕೂಗು ಹಾಕುತ್ತಿದೆ……*
      *ಆಗಿನ ತುಂಬು ಮನೆಯಲ್ಲಿ*
       *ಹೇಳಿ ಹಗುರಾಗುತಿದ್ದ ದಿಗಿಲು*
       *ಈಗಿನ ಪುಟ್ಟ ಗೂಡಿನಲ್ಲಿ*

       

*ಏಕಾಂಗಿಯಾಗಿ ಅನುಭವಿಸುತ್ತಿದೆ..*

*ಸೋಗೆ ಮನೆಯ ಸಂದಿಯಲ್ಲಿ*
*ಸೋರಿ ಹೋಗುತಿದ್ದ ಕಣ್ಣೀರು*
*ಸಿಮೆಂಟು ಕಲ್ಲುಗಳ ಮಧ್ಯೆ*
*ಹೆಪ್ಪುಗಟ್ಟುತ್ತಿದೆ….*

      

*ಆಗ ಚಿಕ್ಕ ಪುಟ್ಟ ಸಂತಸಕ್ಕೆ*
*ಸಂಭ್ರಮಿಸುತಿದ್ದ ಮನಸ್ಸು*

      

*ಈಗ ದೊಡ್ಡದೆನ್ನುವ ಸಂಭ್ರಮಕ್ಕೆ*

  

*ನಗಲು ಕಂದಾಯ ಕೇಳುತ್ತಿದೆ…..*
*ಆಗ ಅಮ್ಮನ ಮಡಿಲಲ್ಲಿ ಅತ್ತು*
*ಮರೆತುಬಿಡುತಿದ್ದ ನೋವು*
*ಈಗ ನಗುವಿನ ಮುಖವಾಡ ಹೊತ್ತು*
*ನಾಟಕವಾಡುತ್ತಿದೆ….*

    

 *ಅಣ್ಣ ತಮ್ಮ ಅಕ್ಕ ತಂಗಿ ಯರ ಜೊತೆ*
*ಹೊಟ್ಟೆ ಹುಣ್ಣಾಗುವಂತೆ ನಕ್ಕ ಮನಸ್ಸು*

     

*ಹಾಸ್ಯದ ಕಾರ್ಯಕ್ರಮಗಳಿಗೆ ಹೋಗಿ*
*ಮುಖ ಊದಿಸಿಕೊಂಡು ಬರುತ್ತಿದೆ….*
*ಬಡತನದ ಬೇಗೆಯಲ್ಲೂ ಗಂಜಿ ಕುಡಿದು*
*ಸುಖದಿಂದ ನಿದ್ರಿಸುತಿದ್ದ ಸಂಸಾರ*
*ಇದೀಗ ಮ್ರಷ್ಟಾನ್ನ ಭೋಜನವ ತಳ್ಳಿ*
*ನಿದ್ದೆ ಗುಳಿಗೆ ಬೇಡುತ್ತಿದೆ…..*

     

*ಬದಲಾವಣೆಗಳನ್ನು ನಮಗೆ ಬಿಟ್ಟು*
*ಕಾಲ ತನ್ನಷ್ಟಕ್ಕೆ ಮುಂದೆ ಸಾಗುತ್ತಿದೆ*
*ಕಾಲ ಬದಲಾಯಿತೋ ನಾವೇ ಬದಲಾದೆವೋ?*
*ಈ ದ್ವಂದ್ವದಲ್ಲಿ ಬದುಕು ಸಾಗುತ್ತಿದೆ ……*
ನನ್ನದಲ್ಲದ ನಾ ಮೆಚ್ಚಿದ ಕವನ.